ನಿಮ್ಮ ಇಚ್ಛಾಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ?
*ನೀವು ಪ್ರತಿ ವರ್ಷವೂ ಆರಂಭದಲ್ಲಿ ಸಂಕಲ್ಪವನ್ನು ಮಾಡಿಕೊಂಡು ಅದನ್ನು ಪೂರೈಸಲು ಬಯಸುವಿರಾ?
*ನೀವು ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡಲು ಬಯಸುವಿರಾ?
*ನೀವು ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಆರೋಗ್ಯಕರ ಜೀವನ ನಡೆಸಲು ಬಯಸುವಿರಾ?
*ನಿಮ್ಮ ಕೋಪವನ್ನು ನೀವು ನಿಯಂತ್ರಿಸಲು ಬಯಸುವಿರಾ?
*ಕ್ಷಣಿಕ ಪ್ರಲೋಭನೆಯಿಂದಾಗಿ ಅನಗತ್ಯ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಲು ನೀವು ಬಯಸುವಿರಾ?
ಹೌದು ಎಂದಾದರೆ, ಈ ಪುಸ್ತಕದ ಸಹಾಯದಿಂದ ನಿಮ್ಮ ಇಚ್ಛಾಶಕ್ತಿಯನ್ನು ಬಲಪಡಿಸಿಕೊಳ್ಳಿ. ಒಬ್ಬ ವ್ಯಕ್ತಿಯ ಬಯಕೆ ಬಲವಾಗಿದ್ದರೆ, ಅವರು ಎಲ್ಲೋ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇಲ್ಲದಿದ್ದರೆ, ಅವರು ಕುಂಟು ನೆಪಗಳಿಂದ ಪ್ರಭಾವಿತರಾಗುವ ಮೂಲಕ ತಮ್ಮ ಇಚ್ಛಾಶಕ್ತಿಯನ್ನು ದುರ್ಬಲಗೊಳಿಸಬಹುದು.
ಉದಾಹರಣೆಗೆ, ಪ್ರತಿಯೊಬ್ಬರೂ ಆರೋಗ್ಯವನ್ನು ಚನ್ನಾಗಿ ನೋಡಿಕೊಳ್ಳುವುದು ಮುಖ್ಯ ಎಂದು ತಿಳಿದಿದ್ದರೂ, ಆಗಾಗ್ಗೆ ಅನಾರೋಗ್ಯಕರವಾದ ಆಹಾರಗಳನ್ನು ತಿನ್ನುತ್ತಾರೆ ಮತ್ತು “ಇವರು ತಿನ್ನಲು ಒತ್ತಾಯಿಸಿದರು…” ಅಥವಾ “ಆಹಾರವನ್ನು ಎಸೆಯುವುದು ಸರಿಯಲ್ಲ, ಆದ್ದರಿಂದ ನಾನು ಅದನ್ನು ತಿಂದೆ…” ಇತ್ಯಾದಿಗಳನ್ನು ನೆಪವಾಗಿ ಹೇಳುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇವು ಕೇವಲ ನೆಪಗಳೇ ಅಥವಾ ಒಬ್ಬರ ಇಚ್ಛಾಶಕ್ತಿ ನಿಜವಾಗಿಯೂ ದುರ್ಬಲವಾಗಿದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಆದ್ದರಿಂದ, ಈ ಪುಸ್ತಕದ ಮೂಲಕ ನಿಮ್ಮ ಇಚ್ಛಾಶಕ್ತಿಯನ್ನು ಬಲಪಡಿಸುವ ಸುಲಭ ಮಾರ್ಗಗಳನ್ನು ಕಲಿಯೋಣ. ಏಕೆಂದರೆ ಇಚ್ಛಾಶಕ್ತಿಯು ನಿಮ್ಮ ಜೀವನದಲ್ಲಿ ಅದ್ಭುತ ಫಲಿತಾಂಶಗಳನ್ನು ಸಾಧಿಸುವ ಸಾಧನವಾಗಿದೆ.



Reviews
There are no reviews yet.