Description
ವಿಶ್ವದ ಬಹು ದೊಡ್ಡ ಕಂಪನವು ನಿಮ್ಮ ಬದುಕನ್ನು ಪರಿವರ್ತಿಸಲಿ
- ನಿಮ್ಮ ಬದುಕು ಹೇಗೆ ಸಾಗುತ್ತದೋ ಎಂದು ಉದ್ವಿಗ್ನತೆ ಮತ್ತು ಅನಿಶ್ಚಿತತೆ ನಿಮಗೆ ಕಾಡುತ್ತಿದೆಯೇ?
- ಅಪನಂಬಿಕೆ ಅಥವಾ ಅಭದ್ರತೆಯ ಭಾವನೆ ನಿಮ್ಮನ್ನು ಕಾಡುತ್ತಿದೆಯೇ?
- ಘಟನೆಗಳಿಂದಾಗಿ ಜೀವನದ ಮೇಲಿನ ವಿಶ್ವಾಸವೇ ತತ್ತರಿಸಿದೆಯೇ?
ಈ ಮೇಲಿನ ಯಾವುದೇ ಪ್ರಶ್ನೆಗೆ ನಿಮ್ಮ ಉತ್ತರ ‘ಹೌದು’ ಎಂದಾದರೆ, ಈ ಪುಸ್ತಕ ನಿಮಗಾಗಿಯೇ. ನಿಮ್ಮ ಜೀವನದಲ್ಲಿ ವಿಶ್ವಾಸವು ಹೇಗೆ ಕೆಲಸ ಮಾಡುತ್ತದೆ ಎಂಬುದು ನಿಮಗೆ ಅರ್ಥವಾದರೆ, ಜೀವನದ ಬಗೆಗಿನ ನಿಮ್ಮ ದೃಷ್ಟಿಕೋನದಲ್ಲಿ ಮಹತ್ತರವಾದ ಬದಲಾವಣೆಯಾಗಲಿದೆ.
ಈ ಬ್ರಹ್ಮಾಂಡದಲ್ಲಿರುವ ಅತಿ ದೊಡ್ಡ ಸ್ಪಂದನ(ತರಂಗ)ವೆAದರೆ, ಅದು ವಿಶ್ವಾಸ. ನಮಗೆ ಆಶೀರ್ವಾದಪೂರ್ವಕವಾಗಿ ಸಿಕ್ಕಿರುವ ಅತ್ಯಂತ ಬಲಿಷ್ಠವಾದ ಶಕ್ತಿ ಅದಾಗಿದೆ. ಈ ಶಕ್ತಿಯನ್ನು ನಾವು ಅನಾವರಣಗೊಳಿಸಿದಾಗ ಮಾತ್ರ ನಿಜವಾದ ಸಂತೃಪ್ತಿ ನಮ್ಮ ಅನುಭವಕ್ಕೆ ಬರುತ್ತದೆ. ವಿಶ್ವಾಸವನ್ನು ನಮ್ಮೊಳಗೆ ಬೀಗ ಜಡಿದು ಇಟ್ಟರೆ ಅಸಂತೃಪ್ತಿ, ಭಯ ಮತ್ತು ಅಸಂತೋಷಕ್ಕೆ ಕಾರಣವಾಗುತ್ತದೆ.
ವಿಶ್ವಾಸದ ಶಕ್ತಿಯನ್ನು ಜಾಗೃತಗೊಳಿಸಬಹುದು ಮತ್ತು ನಮ್ಮ ಜೀವನದಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು ಎಂಬ ಬಗ್ಗೆ ಈ ಪುಸ್ತಕವು ಬೆಳಕು ಚೆಲ್ಲುತ್ತದೆ. ‘ಎಲ್ಲವೂ ಸಾಧ್ಯ’ ಎಂಬ ಖಾತರಿಯನ್ನು ಹುಟ್ಟುಹಾಕುವ ವಿಶ್ವಾಸದ ಏಳು ನಿಯಮಗಳನ್ನು ಅದು ವಿವರಿಸುತ್ತದೆ.
ಈ ಪುಸ್ತಕವನ್ನು ಓದಿ, ವಿಶ್ವಾಸದ ನಿಯಮಗಳ ಬಗ್ಗೆ ಆಳವಾಗಿ ಆಲೋಚಿಸಿ, ಜೀವನದಲ್ಲಿ ಅಳವಡಿಸಿ, ನಿಮ್ಮ ಜೀವನದಲ್ಲಿ ವಿಶ್ವಾಸದ ಮೋಡಿಯನ್ನು ಅನುಭವಿಸಿ.





Reviews
There are no reviews yet.