ಸ್ವೀಕಾರದ ಜಾದು:
ಈಪುಸ್ತಕವುಸ್ವೀಕಾರದ ಜಾದುವಿನಿಂದ ನಿಮ್ಮನ್ನುಸುಳ್ಳು ಖುಷಿಯಿಂದ ಹೊರತೆಗೆದು ಉಚ್ಛ ಆನಂದದವರೆಗೆ ತಲುಪಿಸುತ್ತದೆ. ನೀವು ತ್ವರಿತ ಆನಂದವನ್ನು ಇಲ್ಲೇ ಹಾಗು ಈಗಲೇ ಪಡೆಯಲು ಸಾಧ್ಯ. ಈ ಪುಸ್ತಕವು ತ್ವರಿತ ಆನಂದ ಪಡೆಯುವ ರಹಸ್ಯವನ್ನು ಭೇದಿಸುತ್ತದೆ.
ಪ್ರತಿ ಮನುಷ್ಯನು ನಿಜವಾದ ಖುಷಿಯನ್ನು ಹುಡುಕುತ್ತ ಅಲೆಯುತ್ತಿದ್ದಾನೆ. ನಿಜವಾದ ಖುಷಿ ಸಿಗದ ಪಕ್ಷದಲ್ಲಿ ಅವನು ಅದನ್ನು ಐಶ್ವರ್ಯ-ಸಂಪತ್ತು, ಮಾನ-ಸನ್ಮಾನ, ಪದವಿ-ಪ್ರತಿಷ್ಠೆ, ಹೆಸರು-ಕೀರ್ತಿ, ಸುಖ-ಅನುಕೂಲತೆ, ಮನೋರಂಜನೆ-ಮನಸ್ಸಿಗೆ ಬಂದಂತೆ ಮಾಡುವುದು—ಇವುಗಳಲ್ಲಿ ಹುಡುಕುತ್ತಾನೆ. ಹಾಗಾದರೆ ಖುಷಿಯು ಮೇಲೆ ಹೇಳಿದ ಮಾತುಗಳಿಂದ ಸಿಗುತ್ತದೆಯೇ? ಇಲ್ಲ, ನಿಜವಾದ ಖುಷಿ ಮನಸ್ಸಿನ ಆಚೆ, ಇಚ್ಛೆಗಳ ಹಿಂದೆ, ಮನುಷ್ಯನ ಪೂರ್ವ ಅವಸ್ಥೆಯಲ್ಲಿ ಅಡಗಿದೆ. ಈ ಅವಸ್ಥೆಯವರೆಗೆ ತಲುಪಿಸುವ ಸೂತ್ರ ಸ್ವೀಕಾರಭಾವದಿಂದ ಶುರುವಾಗುತ್ತದೆ.
ನಿಜವಾದ ಖುಷಿಯ ಶೋಧನೆಯಲ್ಲಿ ನಾವು ಕೆಳಗೆ ಕೊಟ್ಟಿರುವ ಏಳು ಪ್ರಕಾರದ ಖುಷಿಗಳಿಂದ ಸಾಗುತ್ತೇವೆ. ನಾವು ಯಾವಾಗಲೂ ಹೋಗಬಯಸುತ್ತಿದ್ದ ಆ ಅವಸ್ಥೆಯ ತನಕ ನಾವು ಎಲ್ಲಿಯವರೆಗೆ ತಲುಪುವುದಿಲ್ಲವೋ ಅಲ್ಲಿಯವರೆಗೆ ಈ ಸಾಗುವಿಕೆ ನಡೆಯುತ್ತದೆ. ಈ ಅವಸ್ಥೆಗೆ ಪರಮ ಆನಂದದ ಅವಸ್ಥೆ ಎಂದು ಕೂಡ ಹೇಳಲಾಗಿದೆ…..
ಉತ್ತೇಜನ ಖುಷಿ: ಪಾರ್ಟಿ, ರಾಕ್ ಸಂಗೀತ, ದಿನಪತ್ರಿಕೆ, ಇಚ್ಛೆಪೂರ್ತಿಯಿಂದ ಸಿಗುವಂತಹ ಖುಷಿ.
ಫಾರ್ಮುಲಾ ಖುಷಿ: ಎರಡು ಖುಷಿಗಳನ್ನು ಸೇರಿಸಿ ಸಿಗುವಂತಹ ಖುಷಿ. ಉದಾ: ರಜೆ ದಿನ + ಪಿಕ್ ನಿಕ್, ರವಿವಾರ + ಟಿ.ವಿ. ಇತ್ಯಾದಿ.
ದ್ವಿತೀಯ ಖುಷಿ: ಬೇರೆಯವರನ್ನು ಚುಡಾಯಿಸಿ, ಸತಾಯಿಸಿ ಸಿಗುವಂತಹ ಸೆಕೆಂಡ್ ಹ್ಯಾಂಡ್ ಖುಷಿ.
ಹಳೆಯ ಖುಷಿ (ಸುಳ್ಳು ಖುಷಿ): ಮೋಸ ಮಾಡಿ, ಛಲ-ಕಪಟದಿಂದ ದುಡ್ಡು ಪಡೆಯುವುದರಿಂದ ಸಿಗುವಂತಹ ಖುಷಿ.
ಇದರ ನಂತರ ಐದನೆಯದು ಸೇವೆಯ ಖುಷಿ, ಆರನೆಯದು ದಿವ್ಯ ಭಕ್ತಿಯ ಖುಷಿ ಹಾಗೂ ಏಳನೆಯದು ಸ್ವಾನುಭವದ ಖುಷಿ ಬರುತ್ತದೆ. ಈ ಖುಷಿಗಳನ್ನು (ಐದನೆಯ, ಆರನೆಯ ಹಾಗೂ ಏಳನೆಯ ಖುಷಿಗಳು) ಪಡೆಯುವುದೇ ಮನುಷ್ಯನ ಗುರಿ.
Reviews
There are no reviews yet.