ನೀವು ಧ್ಯಾನದ ಸವಾಲಿಗೆ ಸಿದ್ಧರಿದ್ದೀರಾ?
ದೈನಂದಿನ ಜೀವನದ ಓಡಾಟದಲ್ಲಿ ನಾವು ಹೆಚ್ಚಾಗಿ ಒತ್ತಡದಲ್ಲಿ ಮತ್ತು ನಮ್ಮ ಲಕ್ಷ÷್ಯಗಳನ್ನು ಪೂರೈಸುವುದರಲ್ಲಿ ಮುಳುಗಿರುತ್ತೇವೆ. ಈ ಗಡಿಬಿಡಿಯಲ್ಲಿ ಧ್ಯಾನದ ವಿಚಾರ ನಮಗೆ ಕಠಿಣ ಮತ್ತು ಬೇರೆಯೇ ಏನೋ ಅನ್ನಿಸುತ್ತದೆ. ಧ್ಯಾನ ಕೇವಲ ಸಾಧುಗಳಿಗೆ, ಸನ್ಯಾಸಿಗಳಿಗೇ ಹೊರತು ದಿನನಿತ್ಯದ ಸವಾಲುಗಳನ್ನು ಎದುರಿಸುವ ನಮ್ಮಂತಹ ಬಿಡುವಿಲ್ಲದ ಜನರಿಗಾಗಿ ಅಲ್ಲ ಎಂದು ನಾವಂದುಕೊಳ್ಳುತ್ತೇವೆ.
ಆದರೆ ಈ ಧ್ಯಾನವು ಎಲ್ಲರಿಗಾಗಿ ಇರಬಹುದೆ? ಈ ಪುಸ್ತಕವು ಧ್ಯಾನಕ್ಕೆ ಸಂಬAಧಿಸಿದ ಅನೇಕ ಮಿಥ್ಯಗಳನ್ನು ದೂರಗೊಳಿಸಿ, ಇದರ ಸರಳತೆ ಮತ್ತು ಸಹಜತೆಯನ್ನು ಅನಾವರಣಗೊಳಿಸುತ್ತದೆ.
ಇದರಲ್ಲಿ ನೀವು ತಿಳಿಯುವಿರಿ – ಹೇಗೆ ಧ್ಯಾನದಿಂದ ಏಕಾಗ್ರತೆ ಮತ್ತು ಕಾರ್ಯಕ್ಷಮತೆಯಲ್ಲಿ ಸುಧಾರಣೆಯಾಗುತ್ತದೆ, ಭಾವನೆಗಳ ಮೇಲೆ
ನಿಯಂತ್ರಣ ಸಿಗುತ್ತದೆ, ಮತ್ತು ಅಂತರಾಳದಲ್ಲಿ ಶಾಂತಿಯ ಅನುಭವವಾಗುತ್ತದೆ. ಸರಿಯಾದ ತಿಳುವಳಿಕೆಯಿಂದ ಧ್ಯಾನವು ಕೇವಲ ಬಾಹ್ಯ ಸಫಲತೆಯನ್ನಷ್ಟೇ ಅಲ್ಲ್ಲ, ಬದಲಿಗೆ ನಮ್ಮ ನಿಜವಾದ ಅಸ್ತಿತ್ವದ ಆಳವಾದ ಗುರುತನ್ನು ಸಹ ನೀಡುತ್ತದೆ.
ಹಾಗಾದರೆ ನೀವು ಧ್ಯಾನದ ಸವಾಲನ್ನು ಸ್ವೀಕರಿಸಿ, ಸ್ವಯಂನ್ನು ಅನ್ವೇಷಿಸಲು ಸಿದ್ಧರಿದ್ದೀರಾ? ಒಂದುವೇಳೆ ನಿಮ್ಮ ಉತ್ತರ “ಹೌದು” ಎಂದಿದ್ದರೆ ಈ ಪುಸ್ತಕವನ್ನು ತೆರೆಯಿರಿ ಮತ್ತು ಇಂದೇ ನಿಮ್ಮ ಪರಿವರ್ತಕ ಪಯಣವನ್ನು ಆರಂಭಿಸಿ.
Reviews
There are no reviews yet.