ನಿಮ್ಮ ಭಾವನೆಗಳನ್ನು ಶತ್ರುಗಳಲ್ಲದೇ,
ಮಿತ್ರರನ್ನಾಗಿ ಮಾಡಿಕೊಳ್ಳಲು ಓದಲೇಬೇಕಾದ ಪುಸ್ತಕ….
ದುಃಖವನ್ನು ನೀಡುವ ಭಾವನೆಗಳಿಂದ ಬಿಡುಗಡೆ ಹೊಂದುವ ಮಾರ್ಗ
ಅಳುವುದು ಒಳ್ಳೆಯದೇ ಅಥವಾ ದೌರ್ಬಲ್ಯವೇ?
ಅಭದ್ರತೆಯ ಭಾವನೆಯನ್ನು ತೊಡೆದುಹಾಕುವುದು ಹೇಗೆ?
ಭಾವನೆಗಳನ್ನು ಮುಕ್ತಗೊಳಿಸುವ ಯೋಗ್ಯವಾದ ಮಾರ್ಗಗಳು
ಭಾವನೆಗಳೊಂದಿಗೆ ಮುಖಾಮುಖಿಯಾಗುವ ಉತ್ತಮವಾದ ವಿಧಾನಗಳು
ಭಾವನೆಗಳನ್ನು ವ್ಯಕ್ತಪಡಿಸುವ ಸರಿಯಾದ ವಿಧಾನಗಳು
ನಿಮ್ಮ ಭಾವನಾಂಕ (ಈ.ಕ್ಯೂ.) ಎಷ್ಟಿದೆ?
ಇಂದು ಜನರಿಗೆ ಐ.ಕ್ಯೂ.(IQ) ಎನ್ನುವುದರ ಪ್ರಾಮುಖ್ಯತೆ ತಿಳಿದಿದೆ. ಆದರೆ ಈ.ಕ್ಯೂ. (Emotional Quotient) ಅದಕ್ಕಿಂತ ಮುಖ್ಯವಾದದ್ದು ಎಂದು ಕೆಲವೇ ಜನರು ಬಲ್ಲರು.
ಭಾವನೆಗಳೊಂದಿಗೆ ಹೋರಾಡುತ್ತಿರುವ ಮನುಷ್ಯನ ಬಳಿ ‘ಈ.ಕ್ಯೂ’ ಇದ್ದಲ್ಲಿ, ಅವನು ಜೀವನದ ಪ್ರತಿಯೊಂದು ಪಂದ್ಯದ ಫಲಿತಾಂಶವನ್ನು ತನ್ನಂತೆ ಬದಲಿಸಬಹುದು. ಆದರೆ ಅವನಲ್ಲಿ ‘ಈ.ಕ್ಯೂ’ ಇಲ್ಲದೇ ಕೇವಲ ಐ.ಕ್ಯೂ. ಮಾತ್ರ ಇದ್ದರೆ ಅದೇ ಕೆಲಸವು ಅವನಿಗೆ ಕಷ್ಟದ್ದೆನಿಸಬಹುದು. ಅದಕ್ಕಾಗಿಯೇ ಭಾವನಾತ್ಮಕ ಪ್ರಬುದ್ಧತೆಯನ್ನು ಸಾಧಿಸುವುದು ಮುಖ್ಯವಾಗಿದೆ.
ಕೇವಲ ವಯಸ್ಸಾಗಿರುವುದು ಪ್ರಬುದ್ಧತೆ ಅಲ್ಲ, ಭಾವನೆಗಳಿಂದ ಪ್ರಭಾವಿತರಾಗದೇ ಅವುಗಳನ್ನು ಸರಿಯಾದ ರೀತಿಯಲ್ಲಿ ಅವಲೋಕಿಸುವ ಕಲೆಯನ್ನು ಕಲಿಯುವುದರಿಂದ ಮಾತ್ರ ಮನುಷ್ಯನು ಭಾವನಾತ್ಮಕವಾಗಿ ಪ್ರಬುದ್ಧನಾಗುತ್ತಾನೆ. ಇದೇ ಪ್ರಭುದ್ಧತೆಯನ್ನು ನಿಮಗೆ ಈ ಪುಸ್ತಕವು ಒದಗಿಸಲಿದೆ.
ಭಾವನೆಗಳಿಂದ ಬಿಡುಗಡೆ ಹೊಂದಲು ಮನುಷ್ಯನು ಕೇವಲ ಎರಡು ಮಾರ್ಗಗಳನ್ನು ಅರಿತಿದ್ದಾನೆ-ಒಂದು ಅವುಗಳನ್ನು ನುಂಗುವುದು ಮತ್ತು ಎರಡನೆಯದು ಭಾವನೆಗಳನ್ನು ಇತರರ ಮೇಲೆ ಹೊರಹಾಕುವುದು. ಇವುಗಳಿಂದ ಹಾನಿಯೇ ಉಂಟಾಗುತ್ತದೆ. ಭಾವನೆಗಳನ್ನು ಬಿಡುಗಡೆ ಮಾಡಲು ಹಲವಾರು ಖಚಿತವಾದ, ಯಾರಿಗೂ ಹಾನಿಯುಂಟುಮಾಡದ, ವಿಧಾನಗಳಿವೆ. ಅವುಗಳನ್ನು ಈ ಪುಸ್ತಕದಲ್ಲಿ ತಿಳಿಸಿಕೊಡಲಾಗಿದೆ.
ಈ ಪುಸ್ತಕವು ನಿಮ್ಮನ್ನು ಭಾವನೆಗಳ ಸುಳಿಯಿಂದ ಹೊರತೆಗೆಯುತ್ತದೆ ಮತ್ತು ನಕಾರಾತ್ಮಕತೆಯು ನಿಮ್ಮನ್ನು ಎಂದಿಗೂ ಬಾಧಿಸದಂತೆ ಪ್ರೀತಿಯ ಲಸಿಕೆಯನ್ನು ನೀಡುತ್ತದೆ.
Reviews
There are no reviews yet.