ಪ್ರತಿಯೊಂದು ರೋಗಕ್ಕೂ ಪರಿಹಾರ ನಿಮ್ಮಲ್ಲಿಯೇ ಇದೆ.
ನೀವು ಶ್ರೀಮಂತರೇ? ಉತ್ತರಿಸುವ ಮೊದಲು ಒಂದು ಕ್ಷಣ ತಡೆಯಿರಿ, ಏಕೆಂದರೆ ನಿಜವಾದ ಶ್ರೀಮಂತರು ‘ಸಂಪೂರ್ಣ ಆರೋಗ್ಯ’ದ ಸಂಪತ್ತನ್ನು ಹೊಂದಿರುವವರು. ನಿಮ್ಮ ಆರೋಗ್ಯವು ಇನ್ನೂ ಉತ್ತಮವಾಗಬಹುದು ಎಂದು ನಿಮಗೆ ಅನ್ನಿಸುತ್ತಿದೆಯೆ? ನೀವು ಆರೋಗ್ಯದ ಉತ್ತುಂಗವನ್ನು ತಲುಪಲು ಬಯಸುವಿರಾ? ನಿಮ್ಮ ಉತ್ತರ ‘ಹೌದು’ ಎಂದಾದರೆ, ಈ ಪುಸ್ತಕವು ನಿಮ್ಮ ವೈದ್ಯವಾಗುತ್ತದೆ.
‘ಸ್ವಾಸ್ಥ್ಯಕ್ಕಾಗಿ ವಿಚಾರ ನಿಯಮಗಳು’ ಸಾಮಾನ್ಯ ಪುಸ್ತಕವಲ್ಲ. ಈ ಪುಸ್ತಕದಲ್ಲಿ ಒದಗಿಸಲಾದ ಸೂತ್ರಗಳು ಸ್ಪಷ್ಟ, ಸರಳ ಮತ್ತು ಅತ್ಯಂತ ಶಕ್ತಿಯುತವಾಗಿವೆ. ಅವು ನಿಮಗೆ ಸಂಪೂರ್ಣ ಆರೋಗ್ಯವನ್ನು ಸಾಧಿಸಲು ಮತ್ತು ಪ್ರತಿ ರೋಗ ಮತ್ತು ನೋವಿನಿಂದ ನಿಮ್ಮನ್ನು ಮುಕ್ತಗೊಳಿಸಲು ನೂರಕ್ಕೆ ನೂರು ಪ್ರತಿಶತ ಸಹಾಯ ಮಾಡುತ್ತವೆ. ಈ ಪುಸ್ತಕದಲ್ಲಿ ಓದಿ-
ಆರೋಗ್ಯವನ್ನು ಸಾಧಿಸಲು ವಿಚಾರ ನಿಯಮಗಳ ಪ್ರಕಾರ ಆಲೋಚನೆಗಳಲ್ಲಿ ಯಾವ-ಯಾವ ಬದಲಾವಣೆಗಳನ್ನು ತರಬೇಕು?
ನೋವು ಮತ್ತು ರೋಗದ ಮಾನಸಿಕ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ?
ನಕಾರಾತ್ಮಕ ಭಾವನೆಗಳಿಂದ ಮುಕ್ತರಾಗುವ ಮೂಲಕ ಆರೋಗ್ಯವನ್ನು ಪಡೆಯುವುದು ಹೇಗೆ?
ಆರೋಗ್ಯಕ್ಕಾಗಿ ‘ಪವರ್ ಆಫ್ ಫೋಕಸ್’ ಪಡೆಯುವುದು ಹೇಗೆ?
ದೈನಂದಿನ ಜೀವನದಲ್ಲಿ ಯಾವ ಆರೋಗ್ಯ ಸಲಹೆಗಳನ್ನು ಅಳವಡಿಸಿಕೊಳ್ಳಬೇಕು?
ದೇಹದ ಪ್ರತಿಯೊಂದು ಭಾಗಕ್ಕೆ ಕ್ಷಮೆಯನ್ನು ಕೇಳುವ ಮೂಲಕ ಪರಿಪೂರ್ಣ ಆರೋಗ್ಯದ ಕಡೆಗೆ ಸಾಗುವುದು ಹೇಗೆ?
ಸ್ವೀಕಾರ, ಸ್ವ-ಸಂವಾದ ಮತ್ತು ಕೃತಜ್ಞತೆಯ ಮೂಲಕ ಪ್ರತಿಯೊಂದು ರೋಗದಿಂದ ಮುಕ್ತಿಯನ್ನು ಪಡೆಯುವುದು ಹೇಗೆ?
ಆರೋಗ್ಯದ ಸಂಪತ್ತನ್ನು ಗಳಿಸುವ ಮೂಲಕ ನೀವು ಶ್ರೀಮಂತರಾಗಲು ಬಯಸಿದರೆ, ಈ ಔಷಧಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿ (ಪುಸ್ತಕವನ್ನು ಓದಿ).
ಕನಿಷ್ಠ ಎರಡು ಬಾರಿ.



Reviews
There are no reviews yet.