ಸ್ವಸಂವಾದ ಅಂದರೆ ಸ್ವಯಂ ಜತೆ ಸಂವಾದ ನಡೆಸುವುದು. ಇದನ್ನು ಏಕಾಂತದಲ್ಲಿ, ಮನದಲ್ಲಿ ಅಥವಾ ಗ್ರುಪ್ನಲ್ಲಿ ಪುನರುಚ್ಚರಿಸುವುದರಿಂದ ಅನಿರೀಕ್ಷಿತ ಪರಿವರ್ತನೆಯ ಅರಿವುಂಟಾಗಬಹುದು. ಯಾವಾಗ ವ್ಯಕ್ತಿ ತನ್ನ ಜೀವನದ ರಿಮೋಟ್ ಕಂಟ್ರೋಲಿನ ಮುಖಾಂತರ ತನ್ನ ಮನಸ್ಸು, ದೇಹ, ಬುದ್ಧಿ, ಚೇತನೆ ಮತ್ತು ಧ್ಯೇಯದ ಮೇಲೆ ನಿಯಂತ್ರಣೆಯನ್ನಿರಿಸಬಲ್ಲನೋ ಆಗಿದು ತುಂಬ ಪರಿಣಾಮಕಾರಿಯೆಂದು ಸಿದ್ಧವಾಗಬಲ್ಲದು. ಇದೇ ವಿಷಯದ ಮೇಲೆ ಸರಶ್ರೀ ತೇಜಪಾರಖೀಯವರ ಮೂಲಕ ರಚಿಸಲ್ಪಟ್ಟ ಪುಸ್ತಕ “ಸ್ವಸಂವಾದ ಒಂದು ಜಾದೂ” ಸ್ವಸಂವಾದದ ಮುಖಾಂತರ ಉತ್ತಮ ಜೀವನ ಪ್ರಾಪ್ತಿಸಿಕೊಳ್ಳುವ ರಹಸ್ಯದ ಪರಿಚಯ ಮಾಡಿಕೊಡುತ್ತದೆ.
5 ಖಂಡಗಳಲ್ಲಿ ವಿಭಜಿಸಲ್ಪಟ್ಟಂಥ ಈ ಪುಸ್ತಕದ ಪ್ರತಿಯೊಂದು ಖಂಡದಲ್ಲಿ ಅನೇಕ ರೋಮಾಂಚಕ ಕತೆಗಳ ಮೂಲಕ ಇದರ ಮಹತ್ವವನ್ನು ತುಂಬ ಆಳವಾಗಿ ತಿಳಿಯಪಡಿಸಲಾಗಿದೆ. ಸ್ವಸಂವಾದ ಮೂಲಕ ಓದುಗರು ಸುಖ-ದುಃಖಗಳ ರಹಸ್ಯ, ವಿಚಾರಗಳ ದಿಶೆ, ಸ್ವಸಂವಾದ ಸಂದೇಶ, ರೋಗ ನಿವಾರಣೆ, ಸೆಲ್ಫ್ ರಿಮೋಟ್ ಕಂಟ್ರೋಲ್, ಕಾರ್ಯದ ಪೂರ್ಣತೆ, ದ್ವೇಷದಿಂದ ಮುಕ್ತಿ, ಉತ್ತಮ ಸ್ವಸಂವಾದ ಮತ್ತು ನವ ವಿಚಾರಗಳನ್ನು ಪ್ರಾಪ್ತಿಸಿಕೊಳ್ಳುವ ಉಪಾಯವನ್ನು ಅರಿಯಬಲ್ಲರು. ಸರಶ್ರೀ ಹೇಳುತ್ತಾರೆ- ಸಕಾರಾತ್ಮಕ ಸ್ವಸಂವಾದದ ಮೇಲೆ ನಂಬಿಕೆ, ವಿಶ್ವಾಸವನ್ನಿರಿಸುವುದರಿಂದಲೇ ಉತ್ತಮ ಜೀವನ ಸಾಗಿಸುವ ಪಥವು ತೆರೆದುಕೊಳ್ಳಬಲ್ಲದು. ಭಾವನೆಗಳಲ್ಲಿ ಭಕ್ತಿ ಮತ್ತು ಶಕ್ತಿಗಳ ಸಂಯೋಗದಿಂದ ಪ್ರಕೃತಿಯೊಂದಿಗೆ ನೇರ ಸಂವಾದ ಸಾಧಿಸಬಹುದಾಗಿದೆ.
ಒಟ್ಟಾಗಿ ಈ ಪುಸ್ತಕವು ಸ್ವಸಂವಾದದ ಮಹತಿಯನ್ನು ರೇಖಾಂಕಿತಗೊಳಿಸುತ್ತ ಓದುಗರಿಗೊಂದು ನವದಿಶೆಯನ್ನು ನೀಡುತ್ತದೆ. ಪುಸ್ತಕದಲ್ಲಿ ಹೆಚ್ಚಾಗಿ ಸರಳವಾದ ಶಬ್ದಗಳನ್ನೇ ಬಳಸಲಾಗಿದೆ, ಹಾಗಾಗಿ ಎಲ್ಲ ಮಟ್ಟದ ವಾಚಕರು ಸುಲಭವಾಗಿ ಶಬ್ದಗಳ ಸಾರವನ್ನು ಗ್ರಹಿಸಿಕೊಳ್ಳಬಲ್ಲರು. ಅದಲ್ಲದೇ ಕತೆ ಹಾಗೂ ಉದಾಹರಣೆಗಳ ಬಳಕೆ ಓದುಗರನ್ನು ಆಕರ್ಷಿಸುತ್ತವೆ.
Reviews
There are no reviews yet.