ವಿಚಾರ ನಿಯಮ- ದ ಪಾವರ್ ಆಫ್ ಹ್ಯಾಪ್ಪಿ ಥಾಟ್ಸ್
ಪ್ರತಿ ಮನುಷ್ಯನು ಜೀವನದಲ್ಲಿ ಸಫಲತೆಯನ್ನು ಪಡೆಯಲು ಬಯಸುತ್ತಾನೆ. ಆದರೆ ಈ ದಿಕ್ಕಿನಲ್ಲಿ ಅವನ ಪ್ರಯತ್ನ ಹೇಗೆ ಫಲಿಸುವುದು ಎಂಬುದೊಂದು ದೊಡ್ಡ ಪ್ರಶ್ನೆ. ಇಲ್ಲಿ ಒಂದು ಮಹತ್ವಪೂರ್ಣವಾದ ವಿಷಯವನ್ನು ನಾವು ತಿಳಿದುಕೊಳ್ಳಬೇಕು, ಅದೇನೆಂದರೆ, ’ಸಮಸ್ಯೆ ಹೊರಗಿಲ್ಲ, ಅದು ಮನುಷ್ಯನ ಮಸ್ತಿಷ್ಕದಲ್ಲಿ ಇರುವುದು, ಆದ್ದರಿಂದ ಅದರ ಸಮಾಧಾನವೂ ಕೂಡ ಅಲ್ಲಿಯೇ ಇದೆ’. ವಿಚಾರದ ಈ ಆಯಾಮವನ್ನು ತಿಳಿದುಕೊಂಡ ಮೇಲೆಯೇ ಜೀವನವು ಮಹಾಜೀವನವಾಗುತ್ತದೆ.
ದಿವ್ಯ ವಿಚಾರಗಳ ವಿಕಾಸದ ಈ ಪ್ರಕ್ರಿಯೆಯ ಮೇಲೆ ಪ್ರಕಾಶ ಚೆಲ್ಲುತ್ತದೆ – ’ವಿಚಾರ ನಿಯಮ- ದ ಪಾವರ್ ಆಫ್ ಹ್ಯಾಪ್ಪಿ ಥಾಟ್ಸ್’. ನಿಮ್ಮಲ್ಲಿ ಶೃದ್ಧೆ, ಭಕ್ತಿ ಹಾಗು ಈ ಪುಸ್ತಕದ ಜ್ಞಾನವಿದ್ದರೆ ಒಂದು ವಿಸ್ಮಯವಾದ ಜೀವನದ ಆಶ್ಚರ್ಯ ನಿಜವಾಗಲೂ ಸಂಭವವಿದೆ. ಈ ಪುಸ್ತಕವು ಅನೇಕ ಭ್ರಮೆಗಳನ್ನು ಮುರಿದು ಒಂದು ಮಹಾರಹಸ್ಯವನ್ನು ಪ್ರಕಾಶಿತಗೊಳಿಸುತ್ತದೆ. ಅದೇನೆಂದರೆ ನಿಮ್ಮ ಜೀವನವು ಬೇರೆಯವರ ಕೈಯಲ್ಲಿಲ್ಲ, ಅದು ನಿಮ್ಮ ವಿಚಾರಗಳ ಕೈಯಲ್ಲಿದೆ. ನಿಮ್ಮ ವಿಚಾರಗಳೇ ನಿಮ್ಮ ಜೀವನದ ದಿಕ್ಕು ಹಾಗು ಪರಿಸ್ಥಿತಿ ನಿರ್ಧರಿಸುತ್ತದೆ. ನಿಮ್ಮ ಜೀವನದಲ್ಲಿ ಏನೇ ಬರುತ್ತಿದ್ದರೂ ಅದು ನಿಮ್ಮ ವಿಚಾರ ನಿಯಮದ ಅನುಸಾರವಾಗಿಯೇ ಬರುತ್ತವೆ ಹಾಗು ನೀವು ಏನನ್ನು ಪಡೆಯಬಯಸುವಿರೋ ಅದೂ ಕೂಡ ವಿಚಾರ ನಿಯಮದಿಂದ ಪಡೆಯಬಹುದು.
ಸಂಪೂರ್ಣ ಜೀವನಜ್ಞಾನದ ನಾಲ್ಕು ಆಯಾಮಗಳು ಈ ಪ್ರಕಾರವಾಗಿದೆ – ಆಸನಾಯಾಮ (ಶಾರೀರಿಕ ಶಕ್ತಿಯ ಕಾವಲುಗಾರ), ಪ್ರಾಣಾಯಾಮ (ಉಸಿರಿನ ಶಕ್ತಿಯ ಸಂಚಾರ), ವಿಚಾರಾಯಾಮ (ಆಲೋಚನಾ ಶಕ್ತಿಯ ಚಮತ್ಕಾರ) ಮತ್ತು ಮೌನಾಯಾಮ (ಮೌನ ಶಕ್ತಿಯ ಸಾಕ್ಷಾತ್ಕಾರ).
ಮೂರನೆಯ ಹಾಗು ನಾಲ್ಕನೆಯ ಆಯಾಮಗಳನ್ನು ಈ ಪುಸ್ತಕದಲ್ಲಿ ’ವಿಚಾರಸೂತ್ರ’ ಹಾಗು ’ಮೌನಮಂತ್ರ’ಗಳ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ಪುಸ್ತಕದ ಮೊದಲ ಖಂಡ ’ವಿಚಾರ ಸೂತ್ರ’ದಲ್ಲಿ ಬಹಳ ಸರಳ ಹಾಗು ಸಹಜ ಭಾಷೆಯಲ್ಲಿ ೭ ಮಹತ್ವಪೂರ್ಣ ವಿಚಾರ ಸೂತ್ರಗಳನ್ನು ಕೊಡಲಾಗಿದೆ. ಅವುಗಳನ್ನು ತಿಳಿದುಕೊಂಡು ಹಾಗು ಜೀವನದಲ್ಲಿ ಅಳವಡಿಸಿಕೊಂಡು ನೀವು ಸಕಾರಾತ್ಮಕ ಮನೋಭಾವ, ದೀರ್ಘ ಸ್ವಸ್ಥ ಜೀವನ, ಶುಭಚಿಂತಕರು, ಸೌಹಾರ್ಯಪೂರ್ಣ ಮಧುರ ಸಂಬಂಧಗಳು, ಒಳ್ಳೆಯ ನೌಕರಿ, ಕರಿಯರ್, ಉಚ್ಛ ಶಿಕ್ಷಣ, ಒಳ್ಳೆಯ ಜೀವನ ಸಂಗಾತಿ, ಸುಖ, ಸಮೃದ್ಧಿ, ಪ್ರೇಮ, ಆನಂದ, ಸಫಲತೆ ಹಾಗು ಮಾನವ ಜೀವನದ ಉಚ್ಚತಮ ಗುರಿಯನ್ನು ಸಹ ಪಡೆದುಕೊಳ್ಳಬಹುದು.
ಪುಸ್ತಕದ ಎರಡನೆಯ ಖಂಡ ’ಮೌನಮಂತ್ರ’ದಲ್ಲಿ ೭ ಮೌನಮಂತ್ರಗಳ ಸಂಕಲನವಿದೆ. ಅವು ನಿಮ್ಮನ್ನು ಶರೀರ, ಬುದ್ಧಿ ಹಾಗು ವಿಚಾರಗಳಿಂದಲೂ ಆಚೆಯ ಕ್ಷೇತ್ರವಾದ ’ಮೌನ’ದಲ್ಲಿ ಕರೆದೊಯ್ಯುತ್ತದೆ. ಅಲ್ಲಿ ವಿಚಾರಗಳಿಂದ ಮುಕ್ತವಾಗಿ ನಿರ್ವಿಚಾರ ಅವಸ್ಥೆ(ಮೌನ)ಯನ್ನು ಪಡೆದುಕೊಳ್ಳಬಹುದು. ಮತ್ತೆ ನೀವು ನಿಮ್ಮ ನಿಜವಾದ ಸ್ವರೂಪ ಎಂದರೆ ’ಸ್ವಬೋಧ’ದ ಅವಸ್ಥೆಯಲ್ಲಿಯೇ ಜೀವಿಸಬಹುದು.
Reviews
There are no reviews yet.