ಸ್ವಯಂಜೊತೆಸಮರ
ಹರ್ಕ್ಯುಲಿಸ್ ನ ಆಂತರಿಕ ಶೋಧ
ನಿಮ್ಮೊಳಗೆ ಹರ್ಕ್ಯುಲಿಸ್ ಗೆ ಜನ್ಮ ನೀಡಿ
ಈ ಕಥೆಯು ಹರ್ಕ್ಯುಲಿಸ್ ದಿರಲಿ ಅಥವಾ ನಿಮ್ಮ ಸಂಬಂಧಗಳದ್ದಿರಲಿ, ಎರಡೂ ಪಕ್ಷದಲ್ಲೂ ಇದು ಮನೋರಂಜಕ ಹಾಗು ಲಾಭಕಾರಿಯಾಗಿದೆ. ಈ ಕಥೆಯಲ್ಲಿ ಒಂದು ಅದ್ಭುತ ರೀತಿಯಲ್ಲಿ ಆತ್ಮಪರೀಕ್ಷಣೆ ಹಾಗು ಆತ್ಮದರ್ಶನ ಮಾಡಿಸಲಾಗಿದೆ. ಬೇರೆಯವರ ಬಗೆಗಿನ ನಮ್ಮ ದೂರು, ಆರೋಪಗಳ ಬೇರು ನಮ್ಮಲ್ಲಿಯೇ ಹೇಗೆ ಅಡಗಿದೆ ಎಂಬ ಸತ್ಯವನ್ನು ನಗುತ್ತ-ನಲಿಯುತ್ತ ಅದ್ವಿತೀಯ ಘಟನಾಕ್ರಮದ ಮಾಧ್ಯಮದಿಂದ ಪ್ರಕಾಶಿತಗೊಳಿಸಲಾಗಿದೆ.
ಈ ಪುಸ್ತಕದಲ್ಲಿ ಬೇರೆ-ಬೇರೆ ಪಾತ್ರಧಾರಿಗಳ ಮುಖಾಂತರ ಜೀವನದಲ್ಲಿ ದಿನನಿತ್ಯ ನಿಮಗೆ ದುಃಖವನ್ನು ನೀಡುವ ಸಾಮಾನ್ಯ ಘಟನೆಗಳ ಬಗ್ಗೆ ಶೋಧ ನಡೆಸಲಾಗಿದೆ.
ಈ ಅಧ್ಯಾತ್ಮಿಕ ಉಪನ್ಯಾಸದ ಕಥೆಯು ’ಹರ್ಕ್ಯುಲಿಸ್’ ಎಂಬ ಹೆಸರಿನ ಪಾತ್ರಧಾರಿಯ ಸುತ್ತ ಹೆಣೆದುಕೊಂಡಿದೆ. ಇದರಲ್ಲಿ ಓರ್ವ ಸಾಧಾರಣ ತಿಳುವಳಿಕೆಯುಳ್ಳ ಸಾಮಾನ್ಯ ಮನುಷ್ಯನ ಜೀವನದಲ್ಲಿ ಘಟಿಸುವ ಘಟನೆಗಳ ಮೂಲಕ ಯಾವ ರೀತಿ ಸ್ವಯಂಜೊತೆ ಸಮರವನ್ನು ನಡೆಸಿ ಚೇತನದ ಉಚ್ಛ ಸ್ತರವನ್ನು ತಲುಪಿ ಸಂಪೂರ್ಣ ಸಮಾಜವನ್ನು ಬದಲಿಸಲು ಸಾಧ್ಯ ಎಂಬುದನ್ನು ಚಿತ್ರಿಸಲಾಗಿದೆ.
* ಕೌಟುಂಬಿಕ ಜಗಳಗಳು, ನೌಕರಿಯಲ್ಲಿನ ತೊಂದರೆಗಳು, ವಿಭಿನ್ನ ಕ್ಷೇತ್ರಗಳಲ್ಲಿ ಮನುಷ್ಯನ ಮೇಲಾಗುವ ಅನ್ಯಾಯ, ನಕಾರಾತ್ಮಕ ವಿಚಾರಗಳ ಉಪದ್ರವ, ಮಾನ್ಯತೆ(ಮೂಢನಂಬಿಕೆ)ಗಳ ಗೋಡೆ – ಇವುಗಳೆಲ್ಲದರಿಂದ ಹೇಗೆ ಬಿಡುಗಡೆ ಹೊಂದಲು ಸಾಧ್ಯ?
* ಈ ಎಲ್ಲ ತೊಂದರೆಗಳು, ಉಪದ್ರವಗಳು ಜೀವನದಲ್ಲಿ ಏಕೆ, ಹೇಗೆ ಬರುತ್ತವೆ ಹಾಗು ಅವುಗಳನ್ನು ಯಾರು ತರುತ್ತಾರೆ…?
* ಶೋಧ ನಡೆಸಿ ಇವುಗಳಿಂದ ನಾವು ಚೇತರಿಸಿಕೊಳ್ಳಬಹುದೇ…?
* ಹರ್ಕ್ಯುಲಿಸ್ ಚೇತರಿಸಿಕೊಂಡನಾದರೆ ನೀವೂ ಸಹ ಹರ್ಕ್ಯುಲಿಸ್ ಆಗಲಾರಿರೇ…? ದಿವ್ಯ ಧ್ವನಿಯನ್ನು ಅನುಸರಿಸಿ ಖಂಡಿತಾ ಆಗಬಲ್ಲಿರಿ…!
ಹಾಗಾದರೆ ನೀವು ನಿಮ್ಮೊಳಗಿನ ’ದಿವ್ಯಧ್ವನಿ’ಯನ್ನು ಅನುಸರಿಸಿ ಶಾಂತಿಯನ್ನು ಶೋಧಿಸಲು ಸಿದ್ಧರಿದ್ದೀರೇನು? ’ಹೌದು’ ಎಂದಾದರೆ ಎತ್ತಿಕೊಳ್ಳಿ ಹರ್ಕ್ಯುಲಿಸ್ ಟಾಸ್ಕ್….ಈ ಪುಸ್ತಕವಿದೆ ನಿಮ್ಮ ಜೊತೆ….ತಿಳಿದುಕೊಳ್ಳಿ ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸುವ ರಹಸ್ಯವನ್ನು!
Reviews
There are no reviews yet.