ಮೃತ್ಯು ನಂತರದ ಜೀವನ – ಮಹಾಜೀವನ
ಮೃತ್ಯು – ಎಲ್ಲರನ್ನೂ ಭಯಭೀತರನ್ನಾಗಿಸುವ ಶಬ್ದ. ಆದರೆ ಮೃತ್ಯು ಎಂದರೆ ನಿಜವಾಗಿಯೂ ಏನು? ಏಕೆ ಮೃತ್ಯುವಿನ ಭೀತಿಯನ್ನು ನೀಡಲಾಗಿದೆ? ಮೃತ್ಯುವೇ ಎಲ್ಲದಕ್ಕೂ ಕೊನೆಯೇ ಅಥವಾ ಮೃತ್ಯುವಿನ ನಂತರವೂ ಜೀವನವಿದೆಯೆ? ಮೃತ್ಯುವಿನ ನಂತರದ ಜೀವನದ ಬಗ್ಗೆ ತಿಳಿದುಕೊಳ್ಳುವ ಮಹತ್ವವೇನು?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ –ಈ ಪುಸ್ತಕ. ಈ ಪುಸ್ತಕವು ಮೃತ್ಯುವಿನ ಬಗೆಗಿನ ನಿಮ್ಮ ಎಲ್ಲ ಮಾನ್ಯತೆಗಳನ್ನು, ತಪ್ಪುಕಲ್ಪನೆಗಳನ್ನು ತೊಡೆದುಹಾಕಿ ನಿಮ್ಮಲ್ಲಿನ ಮೃತ್ಯುವಿನ ಭಯವನ್ನು ಹೋಗಲಾಡಿಸುತ್ತದೆ. ಮೃತ್ಯು ಎಂಬ ಗಹನವಾದ ವಿಷಯವನ್ನು ಪಂಚಾಧಾರ(ಇದರಲ್ಲಿ ವಿಜ್ಞಾನವೂ ಒಂದು ಆಧಾರವಾಗಿದೆ) ಸಹಿತ ಬಹಳ ಸರಳವಾಗಿ ಹಾಗು ಸ್ಪಷ್ಟವಾಗಿ ಇಲ್ಲಿ ನಿರೂಪಿಸಲಾಗಿದೆ. ಮೃತ್ಯುವಿಗೆ ಬಹಳ ಮೊದಲು, ಮೃತ್ಯುವಿಗೆ ಸ್ವಲ್ಪ ಮೊದಲು, ಮೃತ್ಯುವಾದ ತಕ್ಷಣ, ಮೃತ್ಯುವಾದ ಬಹಳ ಸಮಯದ ನಂತರ ಏನೇನಾಗುತ್ತದೆ ಹಾಗು ಮೃತ್ಯುವಿಗೆ ಸಂಬಂಧಿಸಿದ ಕ್ರಿಯಾವಿಧಿಗಳ ಅರ್ಥವೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಭೂತ-ಪ್ರೇತಗಳಿರುತ್ತವೆಯೇ? ಪುನರ್ಜನ್ಮವಾಗುತ್ತದೆಯೇ? ಸ್ವರ್ಗ-ನರಕ ಎಂದರೇನು? ಆತ್ಮಹತ್ಯೆಯನ್ನು ಏಕೆ ಮಾಡಿಕೊಳ್ಳಲೇಬಾರದು? ಆತ್ಮಹತ್ಯೆ ಮಾಡಿಕೊಂಡವರ ಗತಿ ಏನಾಗುತ್ತದೆ ಎಂಬುದನ್ನು ಸಹ ಇಲ್ಲಿ ತಿಳಿಸಿ ಹೇಳಲಾಗಿದೆ.
ನಾವು ಭೂಮಿಗೆ ಬಂದ ಉದ್ದೇಶ್ಯವೇನು? ಭೂಮಿಯ ಮೇಲೆ ನಾವು ಕಲಿಯಬೇಕಾದ ಪಾಠಗಳಾವುವು? ಎಂಬುದನ್ನು ಸಹ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಸಂಪೂರ್ಣ ಜೀವನದ (ಭೂಮಿಯ ಮೇಲಿನ ಜೀವನ ಮತ್ತು ಮೃತ್ಯು ನಂತರದ ಜೀವನ) ಈ ತಿಳುವಳಿಕೆ ನಮ್ಮ ಈಗಿನ ಜೀವನವನ್ನು ಪರಿವರ್ತಿಸುತ್ತದೆ ಹಾಗು ಸುಂದರಗೊಳಿಸುತ್ತದೆ, ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ.
ಬನ್ನಿ, ಈ ಪುಸ್ತಕದ ಸಹಾಯದಿಂದ ಮೃತ್ಯುವಿನ ನಿಜಾಂಶವನ್ನು ಅರಿತು, ನಮ್ಮ ಜೀವನದ ಎಲ್ಲ ಪಾಠಗಳನ್ನು ಕಲಿತು, ಪೃಥ್ವಿಯ ಜೀವನವನ್ನು ಸಾರ್ಥಕಗೊಳಿಸೋಣ, ನಮ್ಮ ಜೀವನವನ್ನು ಮಹಾಜೀವನವನ್ನಾಗಿಸೋಣ.
Reviews
There are no reviews yet.