ಮನಸ್ಸಿನಲ್ಲಿಯೇ ಕ್ಷಮೆಯನ್ನು ಕೋರಿ ಆಂತರಿಕ ಶುದ್ಧಿಯನ್ನು ಮಾಡುವ ಕಲೆ
ನೀವು ನಿಮ್ಮನ್ನು ಪ್ರೀತಿಸುತ್ತೀರಾ? ನೀವು ಯಾವಾಗಲೂ ಖುಷಿಯಿಂದ ಇರಲು ಬಯಸುತ್ತೀರಾ? ನೀವು ನಿಮ್ಮ ಕೌಟುಂಬಿಕ, ಸಾಮಾಜಿಕ, ವ್ಯವಹಾರಿಕ ಸಂಬAಧಗಳನ್ನು ಮಧುರ ಮತ್ತು ದೃಢವಾಗಿಸಲು ಬಯಸುತ್ತೀರಾ? ನೀವು ಜೀವನದಲ್ಲಿ ಸಫಲತೆಯ ಮೆಟ್ಟಿಲನ್ನೇರಲು ಬಯಸುತ್ತೀರಾ?
ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಿದ್ದರೆ ನೀವು ಕೇವಲ ಒಂದೇ ಪದವನ್ನು ಹೃದಯಪೂರ್ವಕವಾಗಿ ಹೇಳುವುದನ್ನು ಕಲಿಯಬೇಕು, ಅದೇ ‘ಸಾರಿ’ ಅಥವಾ ‘ಕ್ಷಮೆ’. ಸಾರಿ, ಕ್ಷಮೆ, ಮಾಫಿ…ಭಾಷೆ ಯಾವುದೇ ಇರಲಿ, ಹೃದಯಪೂರ್ವಕವಾಗಿ ಕೇಳಿದ ಕ್ಷಮೆ ನಿಮ್ಮ ಜೀವನದಲ್ಲಿ ಚಮತ್ಕಾರವನ್ನು ಮಾಡುತ್ತದೆ. ಇದು ನಿಮ್ಮ ಇನ್-ಸಾಫ್ ಮಾಡುತ್ತದೆ, ಅಂದರೆ ಮನಸ್ಸಿನ ಶುದ್ಧಿಯನ್ನು (ಇನ್-ಅಂತರAಗ; ಸಾಫ್-ಶುದ್ಧಿ) ಮಾಡುತ್ತದೆ. ಎಲ್ಲಿಯವರೆಗೆ ಎಂದರೆ ನಿಮ್ಮ ಎಲ್ಲ ಹಿಂದಿನ ಕರ್ಮಬಂಧನಗಳನ್ನು ತೊಡೆದುಹಾಕಿ ನಿಮ್ಮ ಭಾಗ್ಯವನ್ನು ಸಹ ಪ್ರಜ್ವಲಗೊಳಿಸುತ್ತದೆ.
ಈ ಪುಸ್ತಕವು ನಿಮಗೆ ಕ್ಷಮೆಯ ಜಾದುವನ್ನು ಕಲಿಸುತ್ತದೆ. ಇದರಲ್ಲಿ ನೀವು ಕಲಿಯುವ ವಿಷಯಗಳು :
ಕ್ಷಮೆಯ ಮೂಲಕ ಸುಖ-ದುಃಖಗಳಿಂದಾಚೆ ತಲುಪಿ ಆನಂದಿತವಾಗಿ ಹೇಗೆ ಇರುವುದು?
ವಿಕಾರಗಳ ಮುಷ್ಟಿಯಿಂದ ಬಿಡಿಸಿಕೊಳ್ಳುವುದು ಹೇಗೆ?
ನಿಮ್ಮ ಎಲ್ಲಾ ಕರ್ಮಬಂಧನಗಳನ್ನು ಕ್ಷಮೆಯ ಮೂಲಕ ಹೇಗೆ ಅಳಿಸುವುದು?
ನಿಮ್ಮ ಶರೀರದ ಅಂಗಗಳಲ್ಲಿ ಕ್ಷಮೆ ಕೋರಿ ಸ್ವಾಸ್ಥಯವನ್ನು ಹೇಗೆ ಪಡೆಯುವುದು?
ಬೇರೆಯವರನ್ನು ಹೇಗೆ ಮತ್ತು ಯಾಕಾಗಿ ಕ್ಷಮಿಸಿ ‘ಸ್ವಯಂ’ ಅನ್ನು ಹೇಗೆ ಪ್ರೀತಿಸುವುದು?
ಕ್ಷಮೆಯಿಂದ ಮೋಕ್ಷಮೆಯ ಅಂತಿಮ ಸಫಲತೆಯನ್ನು ಹೇಗೆ ಪಡೆಯುವುದು?
Reviews
There are no reviews yet.