ಜನ್ಮಜನ್ಮಾಂತರದ ಪಾಠಗಳು ಮತ್ತು ಸ್ಮೃತಿಗಳ ಉಪಚಾರ
ಸ್ಮೃತಿಗಳ ಉಪಚಾರದಿಂದ ಜೀವನದ ಉಪಚಾರ
ಮಾನವನು ಪೃಥ್ವಿಯ ಮೇಲೆ ಬಂದಿರುವುದು ತನ್ನ ಸಾರ್ಥಕ ಪಾಠಗಳನ್ನು ಕಲಿಯಲು ಮತ್ತು ಪ್ರಕೃತಿಯ ವಿಕಾಸ-ತೇಜವಿಕಾಸದ ಯಾತ್ರೆಯನ್ನು ಮುಂದುವರಿಸಲು. ಆದರೆ ನಾಲ್ಕೂದಿಕ್ಕುಗಳಿಂದ ಬರುವ ನಕಾರಾತ್ಮಕ ತರಂಗಗಳು ಅವನನ್ನು ಭಾರವಾಗಿಸುತ್ತವೆ. ಅವನ ಸ್ಮöÈತಿಗಳಲ್ಲಿರುವ ಘಾಸಿಗೊಂಡ ನೆನಪುಗಳು ಅವನನ್ನು ಅಶಾಂತವಾಗಿಸುತ್ತವೆ, ಆದಕಾರಣ ಅವನು ತನ್ನ ಜೀವನವನ್ನು ಸಾರ್ಥಕಪಡಿಸಲಾರ.
ನಾವು ಈ ಹೊರಗಿನ ಕಾರಣಗಳಿಂದ ಬರುವ ನಕಾರಾತ್ಮಕತೆಯನ್ನು ತಡೆಯಬಹುದೆ? ಇಲ್ಲ ಅಲ್ಲವೇ! ಹಾಗಾದರೆ ಈ ಭಾರ ಭಾರವೆನಿಸದ ಹಾಗೆ, ಸಂಕಟಗಳಿದ್ದಾಗಲೂ ನಾವು ಹಗುರವಾಗಿದ್ದುಕೊಂಡು ಆನಂದದಿAದಿರಲು, ಇತರರಲ್ಲೂ ಈ ಶುಭ ಇಚ್ಛೆ ಜಾಗೃತಗೊಳಿಸಿ ಜೀವನವನ್ನು ಸಾರ್ಥಕವಾಗಿಸಲು ಏನು ಮಾಡಬೇಕು? ಇದಕ್ಕೆ ಪರಿಹಾರ – ಕಟು ಸ್ಮೃತಿಗಳ ಉಪಚಾರವೇ ಜೀವನದ ಉಪಚಾರ….ಆದರೆ ಇದನ್ನು ಹೇಗೆ ಸಾಧಿಸುವುದು? ಈ ಪುಸ್ತಕವು ಇದರ ಉತ್ತರವಾಗಿದೆ!
ಇದರಲ್ಲಿ ನೀವು ಪ್ರಕೃತಿಯ ಪ್ರೇಮಮಯ ಕಾರ್ಯಪ್ರಣಾಲಿಯನ್ನು ಅರ್ಥಮಾಡಿಕೊಳ್ಳಬಹುದು. ಜೊತೆಗೆ ನಿಮ್ಮೆದುರು ಪ್ರಕೃತಿಯ ಕಾರ್ಯಯೋಜನೆಯ ಆಳವಾದ ರಹಸ್ಯ ಪ್ರಕಟವಾಗುತ್ತದೆ. ಇವನ್ನು ತಿಳಿದು ನೀವು ಜೀವನದಲ್ಲಿ ಏನನ್ನು ಮಾಡಲು ಬಂದಿರುವಿರೋ ಅದನ್ನು ಮಾಡಲು ಶುರುಮಾಡಿ. ಪುಸ್ತಕದ ಮುಖ್ಯ ಅಂಶಗಳು ಹೀಗಿವೆ-
• ಶರೀರ ಮತ್ತು ಮನಸ್ಸಿನ ಮೇಲೆ ಭಾರ ಹೆಚ್ಚಾಗಿಸುವ ನಾಲ್ಕು ಮುಖ್ಯ ಕಾರಣಗಳು
• ಕರ್ಮ ಬಂಧನವನ್ನು ಅಳಿಸಲಿಕ್ಕಿರುವ ಪ್ರಭಾವಶಾಲಿ ಕ್ರಮಗಳು
• ನಿಮ್ಮ ಮೇಲೆ ಜೀವನದ ಕೆಟ್ಟ ಅನುಭವಗಳ ಪ್ರಭಾವ ಮತ್ತು ಅದನ್ನು ಅಳಿಸುವುದರ ಮಹತ್ವ
• ಘಾಸಿಗೊಂಡ ಸ್ಮೃತಿಗಳನ್ನು ಗುಣಪಡಿಸುವ ಉಪಾಯ – ಸಾರ್ಥಕ ಪಾಠಗಳು
ಸಾರ್ಥಕ ಪಾಠಗಳನ್ನು ಕಲಿಯಲು ಪ್ರಕೃತಿಯ ಮೂಲಕ ಮಾಡಲಾದ ವಿಶೇಷ ವ್ಯವಸ್ಥೆ-ನಿಮ್ಮ ಸುತ್ತಮುತ್ತಲಿನ ಜನರು, ಘಟನೆಗಳು, ಪರಿಸ್ಥಿತಿಗಳು
ಹಾಗಾದರೆ ಬನ್ನಿ, ಪುಸ್ತಕವನ್ನು ತೆರೆದು, ಗಾಯಗೊಂಡ ಸ್ಮೃತಿಗಳ ಉಪಚಾರದಿಂದ ಜೀವನದ ಉಪಚಾರ ನಿಯಮ ತಿಳಿದುಕೊಂಡು, ನಮ್ಮ ಸಾರ್ಥಕ ಪಾಠಗಳನ್ನು ಕಲಿಯೋಣ.
Reviews
There are no reviews yet.