ಜಾಗೃತಿ ಮೂಡಿಸುವ ಉತ್ತರಗಳು
ಜೀವನದ ೧೧೧ ಜಿಜ್ಞಾಸೆಗಳ ಸಮಾಧಾನ
ಈ ಪುಸ್ತಕವು ಉತ್ತರಗಳ ಉಪನಿಷತ್ತಿನಂತಿದೆ. ಕಾರಣ ಇದರಲ್ಲಿ ಸತ್ಯಾನ್ವೇಷಿಗಳಿಗೋಸ್ಕರ ಜೀವನದ ೧೧೧ ಜಿಜ್ಞಾಸೆಗಳ ಉತ್ತರಗಳನ್ನು ಕೊಡಲಾಗಿದೆ. ಈ ಉತ್ತರಗಳು ನಿಮ್ಮಲ್ಲಿರುವ ಅಹಂಭಾವವನ್ನು ನಷ್ಟಗೊಳಿಸಬಲ್ಲವು, ನಿಮ್ಮನ್ನು ಮನನದ ಆಳಕ್ಕೆ ಎಷ್ಟೊಂದು ಕರೆದೊಯ್ಯಬಲ್ಲವೆಂದರೆ ನಿಮ್ಮಲ್ಲಿರುವ ಎಲ್ಲ ಕೆಟ್ಟ ಪ್ರವೃತ್ತಿಗಳು ಹಾಗು ತಪ್ಪು ನಂಬಿಕೆಗಳು ಕಳಚಿ ಬೀಳುವವು.
ಏಳು ಖಂಡಗಳಲ್ಲಿ ವಿಭಾಜಿಸಲ್ಪಟ್ಟ ಈ ಪುಸ್ತಕವು ಪ್ರಶ್ನೋತ್ತರಗಳ ರೂಪದಲ್ಲಿ ಮೂಡಿಬಂದಿದೆ. ಅವುಗಳಲ್ಲಿ ಅಧ್ಯಾತ್ಮ, ದೈನಂದಿನ ಜೀವನದಲ್ಲೆದುರಾಗುವ ಸಮಸ್ಯೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳು, ಈಶ್ವರ, ಆತ್ಮಸಾಕ್ಷಾತ್ಕಾರ, ಆತ್ಮಬೋಧ, ವ್ಯವಸಾಯ ಇತ್ಯಾದಿ ವಿಷಯಗಳು ಸಮಾವೇಶಗೊಂಡಿವೆ. ಈ ಪ್ರಶ್ನೆಗಳು ಪ್ರಕೃತಿಯನ್ನರಿಯುವ ರಹಸ್ಯಗಳಾಗಿವೆ. ಇವುಗಳ ಉತ್ತರಗಳನ್ನು ಈಶ್ವರನು ಸಂಕೇತಗಳ ರೂಪದಲ್ಲಿ ಅದೆಲ್ಲೋ ಅಡಗಿಸಿಟ್ಟಿದ್ದಾನೆ. ನಾವೀಗ ಆ ಸಂಕೇತಗಳನ್ನು ಅರಿತುಕೊಂಡು ಆ ರಹಸ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಪುಸ್ತಕದ ಭಾಷೆ ತುಂಬಾ ಸರಳ ಹಾಗು ಸಹಜವಾಗಿದೆ. ಇಷ್ಟೊಂದು ಗಂಭೀರವಾದ ವಿಷಯವನ್ನು ಲೇಖಕರು ತುಂಬ ಸುಲಭವಾಗಿ ನಮ್ಮೆದುರಿಗೆ ತೆರೆದಿಟ್ಟಿದ್ದಾರೆ. ನೀವೂ ಸಹ ಜೀವನದ ರಹಸ್ಯಗಳ ಹಾಗು ಸತ್ಯದ ಅನ್ವೇಷಣೆಯಲ್ಲಿರುವಿರಾದರೆ ಈ ಪುಸ್ತಕವು ಅವುಗಳನ್ನು ತಲುಪುವ ಒಂದು ಮಾರ್ಗವಾಗಬಲ್ಲದು.
Reviews
There are no reviews yet.