ಸಮೃದ್ಧಿಯ ರಹಸ್ಯ
ಇದು ನಿಮಗೆ ತಿಳಿದಿದೆಯೇ?
- ಹಣ ಗಳಿಸುವುದು ಕಠಿಣವೇ ಅಥವಾ ಸುಲಭವೇ?
- ನಿಜವಾದ ಶ್ರೀಮಂತ ಅಧಿಕ ಹಣ ಗಳಿಸುವವನೋ ಅಥವಾ ಅಧಿಕ ಹಣ ಉಳಿಸುವವನೋ?
- ಅಂಗೈಯಲ್ಲಿ ತುರಿಕೆ ಉಂಟಾದರೆ ಹಣ ಬರುವುದೋ ಅಥವಾ ನೈಜ ಕರ್ಮದಿಂದಲೋ?
- ಹೇರಳವಾಗಿ ಹಣವಿರುವವನು ಆದ್ಯಾತ್ಮದ ಕೊರತೆ ಹೊಂದಿರುವನೋ ಅಥವಾ ಹಣದ ಕೊರತೆ ಇರುವವನು ಜಾಸ್ತಿ ಅದ್ಯಾತ್ಮನೋ?
- ಹಣವು ದೈವವೋ ಅಥವಾ ದೈತ್ಯವೋ?
- ಹಣ ಅಂಗೈಯನ ಧೂಳೋ ಅಥವಾ ಹಸ್ತಕ್ಕೆ ಶೋಭೆಯೋ?
- ಹಣವನ್ನು ಕಡ ಕೊಂಡೊಯ್ಯುವವರು ಮರುಪಾವತಿ ಮಾಡುವುದಿಲ್ಲವೋ ಅಥವಾ ಕೊಡುಗೈ ದಾನಿಯಾದಷ್ಟು ಹಣ ಬೆಳೆಯುವುದೋ?
- ಹಣ, ಸಂತೋಷ, ಸಮಯ ಇತ್ಯಾದಿಗಳ ಕೊರತೆಯಿಂದ ಹಂಚಲು ಅಸಾಧ್ಯವೋ ಅಥವಾ ಇವುಗಳು ನಮ್ಮ ಕಡೆಗೆ ಹೇರಳವಾಗಿ ಇವೆಯೋ?
- ಹಣ ಕೈಗೆ ಬರುತ್ತಲೇ ಮಿತ್ರರು ಶತ್ರುಗಳಾಗುತ್ತಾರೋ ಅಥವಾ ಹಣದ ಬರುವಿಕೆಯಿಂದ ಮಿತ್ರರು ಹೆಚ್ಚಾಗುತ್ತಾರೋ?
- ಅಧಿಕ ಹಣ ಹೆಚ್ಚಿನ ಸಮಸ್ಯೆಯೋ ಅಥವಾ ಹೆಚ್ಚಿನ ಅನುಕೂಲತೆಯೋ?
- ಹಣದಿಂದ ಎಲ್ಲವನ್ನೂ ಕೊಳ್ಳಬಹುದೋ ಅಥವಾ ಪ್ರೀತಿ, ಆದರ, ಸಂತೋಷಗಳನ್ನು ಕೊಳ್ಳಲು ಅಸಾಧ್ಯವೋ?
ನಿಮ್ಮೊಳಗಿನ ಹಣದ ಬಗ್ಗೆ ನಂಬಿಕೆಗಳನ್ನು ಪರಿಶೀಲಿಸಿದ ನಂತರ, ನಿಮ್ಮಲ್ಲಿ ತಪ್ಪು ನಂಬಿಕೆಗಳಿದ್ದರೆ, ಸಮೃದ್ಧಿಯು ನಿಮ್ಮಿಂದ ದೂರವಾಗುತ್ತದೆ ಎಂದು ಅರ್ಥಮಾಡಿಕೊಳ್ಳಿ. ಸಮೃದ್ಧಿಯನ್ನು ಸಾಧಿಸಲು ಬಯಸುವ ಜನರು ಹಣದ ವಿಷಯಗಳಲ್ಲಿ ಎಂದಿಗೂ ಅಸಡ್ಡೆ ಹೊಂದಿರುವುದಿಲ್ಲ. ಹಣದ ಸಮಸ್ಯೆಗಳ ಮೂಲಭೂತ ಅಂಶಗಳನ್ನು ಅವರು ತಿಳಿದಿದ್ದಾರೆ.
ಈ ಸೂತ್ರವನ್ನು ಎಚ್ಚರಿಕೆಯಿಂದ ನೋಡಿ:
ಹಣದ ಸಮಸ್ಯೆಗಳು = ಅಜಾಗರೂಕತೆ + ಸೋಮಾರಿತನ + ಕೆಟ್ಟ ಅಭ್ಯಾಸಗಳು – ತಿಳುವಳಿಕೆ
ಈ ಪುಸ್ತಕದಲ್ಲಿ ನೀವು ಈ ಸೂತ್ರವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಣದ ಸಂಪೂರ್ಣ ತಿಳುವಳಿಕೆಯನ್ನು ಒದಗಿಸುವ ಈ ಪುಸ್ತಕದ ಪ್ರಯೋಜನವನ್ನು ಪಡೆದುಕೊಳ್ಳಿ.
ನಿಂತ ಹಣವು ನಿಂತ ನೀರಿನ ರೀತಿಯಲ್ಲಿಯೇ ಆಗಿಬಿಡುತ್ತದೆ. ಅಂತಹ ನೀರಿನಿಂದ ಕೆಟ್ಟ ವಾಸನೆ ಹೊರಹೊಮ್ಮಲು ಪ್ರಾರಂಭಿಸುತ್ತದೆ.
Reviews
There are no reviews yet.