ಸಂತೋಷ, ಆಶ್ಚರ್ಯ ಮತ್ತು ಮೆಚ್ಚುಗೆಯೊಂದಿಗೆ
ಹೊಸ ಅತಿಥಿಯನ್ನು ಸ್ವಾಗತಿಸುವುದು ಹೇಗೆ
‘ಗರ್ಭ ಸಂಸ್ಕಾರ’ ಎಂಬುದು ನಮ್ಮ ಪೂರ್ವಜರಿಂದ ಪ್ರಾಚೀನ ಸಾಂಸ್ಕೃತಿಕ ಪರಂಪರೆಯಾಗಿ ಸ್ವೀಕರಿಸಲ್ಪಟ್ಟ ಆಚರಣೆಯಾಗಿದೆ. ಆದರೆ ಕ್ರಮೇಣ ತಿಳುವಳಿಕೆಯ ಕೊರತೆಯಿಂದಾಗಿ ಅದರ ಪ್ರಾಮುಖ್ಯತೆ ಕಡಿಮೆಯಾಯಿತು. ಇಂದು, ವಿಜ್ಞಾನಿಗಳು ಸಹ ಮಗುವಿನ ಮಾನಸಿಕ ಮತ್ತು ವ್ಯಾವಹಾರಿಕ ಬೆಳವಣಿಗೆಯು ಗರ್ಭದಿಂದಲೇ ಪ್ರಾರಂಭವಾಗುತ್ತದೆ ಮತ್ತು ಸರಿಯಾದ ಗರ್ಭ ಸಂಸ್ಕಾರವನ್ನು ನೀಡುವ ಮೂಲಕ ಸುಧಾರಿಸಬಹುದು ಎಂದು ಒಪ್ಪಿಕೊಂಡಿದ್ದಾರೆ. ಅದೇ ರೀತಿ ಗರ್ಭ ಸಂಸ್ಕಾರದ ಉಪಯುಕ್ತತೆ ಮತ್ತು ಮಹತ್ವವನ್ನು ಆಧುನಿಕ ಪೀಳಿಗೆ ಕೂಡಾ ಒಪ್ಪಿಕೊಂಡಿದೆ.
ಇಂತಹ ಸಂದರ್ಭದಲ್ಲಿ ಇಂದಿನ ಕಾಲದೊಂದಿಗೆ ಸಾಮರಸ್ಯ ಹೊಂದುವAತಹ, ಇಂದಿನ ಭಾಷೆಯಲ್ಲಿ ತಿಳಿಸುವಂತಹ, ಇಂದಿನ ಪ್ರಕರಣಗಳು ಹಾಗೂ ಸವಾಲುಗಳನ್ನು ಮುಂದಿಟ್ಟುಕೊAಡು ಪೋಷಕರಿಗೆ ಸರಿಯಾದ ದಾರಿ ತೋರಿಸುವ ‘ಗರ್ಭ ಸಂಸ್ಕಾರ’ದ ತಿಳುವಳಿಕೆ ಅಗತ್ಯವಾಗಿದೆ. ಪ್ರಸ್ತುತಪಡಿಸಿದ ಪುಸ್ತಕವನ್ನು ಅಂತಹ ಉದ್ದೇಶದಿಂದ ಬರೆಯಲಾಗಿದೆ. ಇದರಲ್ಲಿ ಗರ್ಭ ಸಂಸ್ಕಾರದ ಪ್ರಾಚೀನ ಮೂಲ ತಿಳುವಳಿಕೆಯನ್ನು ಆಧುನಿಕ ಪರಿಸರಕ್ಕೆ ತಕ್ಕಂತೆ ಪ್ರಸ್ತುತಪಡಿಸಲಾಗಿದೆ. ಈ ಪುಸ್ತಕವು ನಮಗೆ ಈ ಕೆಳಗಿನ ಅಂಶಗಳನ್ನು ತಿಳಿಸುತ್ತದೆ:
ನಮ್ಮೊಂದಿಗೆ ಗರ್ಭಸ್ಥ ಶಿಶುವಿನದೂ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕ ವಿಕಾಸವನ್ನು ಮಾಡುವುದು ಹೇಗೆ, ಅದನ್ನು ಸಾತ್ವಿಕ ಮಗುವನ್ನಾಗಿ ಮಾಡುವುದು ಹೇಗೆ?
ಗರ್ಭಾವಸ್ಥೆಯಲ್ಲಿ ನಮ್ಮ ಆಹಾರ, ಆಲೋಚನೆಗಳು ಮತ್ತು ನಡವಳಿಕೆ ಹೇಗಿರಬೇಕು?
ಗರ್ಭಸ್ಥ ಶಿಶುವಿನಲ್ಲಿ ಉತ್ತಮ ಗುಣಗಳನ್ನು ಹೇಗೆ ಬೆಳೆಸುವುದು ಮತ್ತು ಅದನ್ನು ಕೆಟ್ಟ ಅಭ್ಯಾಸಗಳು ಮತ್ತು ದುಶ್ಚಟಗಳಿಂದ ಹೇಗೆ ದೂರವಿಡುವುದು?
ಎಲ್ಲ ರೀತಿಯಲ್ಲೂ ಅತ್ಯುತ್ತಮ ಬೆಳವಣಿಗೆಯನ್ನು ಹೊಂದುವAತಹ ವಾತಾವರಣವನ್ನು ಗರ್ಭಸ್ಥ ಶಿಶುವಿಗೆ ಒದಗಿಸುವುದು ಹೇಗೆ?
ಗರ್ಭಸ್ಥ ಶಿಶುವಿನ ಮನಸ್ಸಿನಲ್ಲಿ ಕುಟುಂಬದ ಸದಸ್ಯರ ಬಗ್ಗೆ ಪ್ರೀತಿ, ವಿಶ್ವಾಸ ಮತ್ತು ಭದ್ರತೆಯ ಭಾವವನ್ನು ತುಂಬುವುದು ಹೇಗೆ?
ಪ್ರಸವಕ್ಕೂ ಮೊದಲು ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು?
ಮುಂತಾದ ವಿಷಯಗಳನ್ನು ಆಸಕ್ತಿದಾಯಕ ಕಥೆ ಮತ್ತು ಅದರ ಪಾತ್ರಗಳ ಮೂಲಕ ನೀವು ಕಲಿಯಬಹುದು. ಇಲ್ಲಿನ ಪಾತ್ರಗಳ ಪ್ರಶ್ನೆಗಳು ಮತ್ತು ಸಮಸ್ಯೆಗಳಲ್ಲಿ ನಿಮ್ಮ ಪ್ರಶ್ನೆಗಳು ಮತ್ತು ಸಮಸ್ಯೆಗಳ ಒಂದು ನೋಟವನ್ನು ನೀವು ಕಾಣಬಹುದು, ಜೊತೆಗೆ ಅವುಗಳನ್ನು ಪರಿಹರಿಸಲು ಸರಳ ಮತ್ತು ಅತ್ಯುತ್ತಮ ಮಾರ್ಗದರ್ಶನವನ್ನು ಪಡೆಯಬಹುದು.
Reviews
There are no reviews yet.