ಏಕಾಗ್ರ ಮನಸ್ಸು – ಯಶಸ್ಸಿನ ಮೊದಲ ಸಂಕೇತ
ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಏಕಾಗ್ರತೆಯ ಅಗತ್ಯವಿದೆ. ಒಬ್ಬ ವೈದ್ಯ ಆಪರೇಶನ್ ಟೇಬಲ್ನ ಮುಂದೆ ನಿಂತು ಆಪರೇಶನ್ ಮಾಡುತ್ತಿರುವಾಗ ಸಂಪೂರ್ಣವಾಗಿ ಗಮನ ಕೊಡಲಿಲ್ಲ ಎಂದಿಟ್ಟುಕೊಳ್ಳಿ. ಆ ಟೇಬಲ್ ಮೇಲೆ ಮಲಗಿರುವ ರೋಗಿಯ ಗತಿ ಏನಾಗುತ್ತದೆ ಗೊತ್ತಾ?
ಒಬ್ಬ ಬಿಲ್ಡರ್ ತನ್ನ ನಿರ್ಮಾಣ ಕಾರ್ಯದ ಬಗ್ಗೆ ಸಂಪೂರ್ಣ ಗಮನ ಹರಿಸದಿದ್ದರೆ, ಅವನು ನಿರ್ಮಿಸಿದ ಕಟ್ಟಡದಲ್ಲಿ ವಾಸಿಸುವ ಜನರ ಭವಿಷ್ಯ ಏನಾಗಬಹುದೆಂದು ಊಹಿಸಿ!
ಒಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿಗಳ ಬಗ್ಗೆ ಸಂಪೂರ್ಣ ಗಮನ ಹರಿಸದಿದ್ದರೆ, ಆ ವಿದ್ಯಾರ್ಥಿಗಳ ಭವಿಷ್ಯ ಗತಿ ಏನಾಗಬಹುದೆಂದು ಹೇಳಬೇಕಾಗಿಲ್ಲ.
ಹೇಳಬೇಕೆಂದರೆ- ಇಂದು ಪ್ರತಿ ಕ್ಷೇತ್ರದಲ್ಲಿ ೧೦೦% ಏಕಾಗ್ರತೆ ಬೇಕು ಆದರೆ ಅದರ ಬಗ್ಗೆ ಮಾತನಾಡುವಾಗ, ಅದು ವಿದ್ಯಾರ್ಥಿಗಳಿಗೆ ಮಾತ್ರ ಎಂದು ಜನರು ಭಾವಿಸುತ್ತಾರೆ. ಬೇರೆ ಯಾವ ಕ್ಷೇತ್ರದಲ್ಲಿಯೂ ಅದಕ್ಕೆ ಪ್ರಾಮುಖ್ಯತೆ ನೀಡಿಲ್ಲ, ಅದರ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವೂ ಇಲ್ಲ ಎಂದುಕೊಳ್ಳುತ್ತಾರೆ. ಪ್ರತಿಯೊಂದು ಉದ್ಯೋಗದ ಪ್ರತಿ ವಿಭಾಗದಲ್ಲಿ ಇದರ ಅಗತ್ಯವಿದೆ. ಉದಾಹರಣೆಗೆ ಅಕೌಂಟ್ಸ್, ಪ್ರೊಡಕ್ಷನ್, ಸೇಲ್ಸ್ ಇತ್ಯಾದಿ. ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರಿಗೂ ಏಕಾಗ್ರತೆಯ ಅಗತ್ಯವಿರುತ್ತದೆ, ಇದರಿಂದಾಗಿ ಅವರು ಸಮಯಕ್ಕೆ ಸರಿಯಾಗಿ ಮತ್ತು ತಪ್ಪುಗಳನ್ನು ಮಾಡದೇ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಬಲ್ಲದು. ಮನೆಯಲ್ಲಿ ಗೃಹಿಣಿಯೂ ಕೂಡ ಸಂಪೂರ್ಣ ಏಕಾಗ್ರತೆಯಿಂದ ಅಡುಗೆ ಮಾಡಿದರೆ ಅಡುಗೆಯು ರುಚಿಯಾಗಿ ಮತ್ತು ಆರೋಗ್ಯಕರವಾಗಿರುತ್ತದೆ.
ಈ ಪುಸ್ತಕದಲ್ಲಿ, ನಿಮ್ಮ ದುರ್ಬಲ ಏಕಾಗ್ರತೆಗೆ ಕಾರಣಗಳು, ಅವುಗಳಲ್ಲಿ ಬರುವ ಅಡೆತಡೆಗಳು ಮತ್ತು ಸಣ್ಣ ಕೆಲಸಗಳಲ್ಲಿಯೂ ಹೇಗೆ ಗಮನಹರಿಸಬೇಕು ಎಂಬ ೨೧ ಉಪಾಯಗಳನ್ನು (ಹ್ಯಾಕ್ಸ್) ನೀಡಲಾಗಿದೆ. ಇವುಗಳ ಸಹಾಯದಿಂದ ನೀವು ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗಬಹುದು. ಇದೇ ಏಕಾಗ್ರ ಮನಸ್ಸಿನ ಸಂಕೇತವಾಗಿದೆ.
Reviews
There are no reviews yet.