ಆಲಸ್ಯದ ಚಕ್ರವ್ಯೂಹವನ್ನು ಭೇದಿಸಿ
ಮನುಷ್ಯನ ಅಸಫಲತೆಯ ಹಿಂದೆ ಎಲ್ಲಕ್ಕಿಂತ ದೊಡ್ಡ ಕೈವಾಡವಿರುವ ವಿಕಾರವೆಂದರೆ ಅದು ತಮಸ್ಸು, ತಮೋಗುಣ. ತಮೋಗುಣವನ್ನು ಆಲಸ್ಯ, ಬೇಸರಿಕೆ, ಅತೀ ನಿದ್ರೆ, ಮಂಪರು….ಎಂದು ವರ್ಣಿಸಬಹುದು. ತಮೋಗುಣ ಹೆಚ್ಚಾದರೆ ನಮ್ಮೊಳಗೆ ಕೆಲವು ಹೆಚ್ಚುವರಿ ವಿಕಾರಗಳು ಸೇರಿಕೊಳ್ಳುತ್ತವೆ. ಉದಾ: ಮಾತು-ಮಾತಿಗೆ ಸುಳ್ಳು ಹೇಳುವುದು, ತನ್ನ ವಿಶ್ರಾಮದಲ್ಲಿ ವಿಘ್ನವಾದರೆ ಸಿಟ್ಟು ಮಾಡಿಕೊಳ್ಳುವುದು, ಕಿರಿಕಿರಿಗೊಳ್ಳುವುದು, ಶರೀರ ನಿಷ್ಕ್ರಿಯಗೊಂಡು ರೋಗಗಳಿಂದ ಸುತ್ತುವರಿಯಲ್ಪಡುವುದು, ಸಮಯವಿರುವಾಗಲೇ ಕೆಲಸ ಪೂರ್ಣಗೊಳ್ಳದಿದ್ದಲ್ಲಿ ಅಸಫಲತೆಯನ್ನು ಎದುರಿಸಬೇಕಾಗುವುದು, ಇದರಿಂದ ದುಃಖ ಹಾಗೂ ದರಿದ್ರತನದ ಚಕ್ರವ್ಯೂಹ ಹಮ್ಮಿಕೊಳ್ಳುತ್ತದೆ.
ಈ ಪುಸ್ತಕದಲ್ಲಿ ಜಡತ್ವದ ಚಕ್ರವ್ಯೂಹವನ್ನು ತೊಡೆದುಹಾಕಲು/ಭೇದಿಸಲು ಕ್ರಮಬದ್ಧವಾದ ಹೆಜ್ಜೆಗಳಲ್ಲಿ ಮಾರ್ಗದರ್ಶನ ನೀಡಲಾಗಿದೆ. ಒಂದೊಂದು ಹೆಜ್ಜೆ ಇಡುತ್ತಿದ್ದಂತೆ ಆಲಸ್ಯವೆಂಬ ಗೋಡೆಯ ಮೇಲೆ ಬಲವಾದ ಏಟುಗಳ ದಾಳಿಯಾಗುತ್ತದೆ ಹಾಗೂ ಸತತವಾದ ಏಟುಗಳಿಂದ ಈ ಗೋಡೆ ಛಿದ್ರ-ಛಿದ್ರವಾಗಿಹೋಗುತ್ತದೆ.
ಈ ಪುಸ್ತಕದ ಉದ್ದೇಶವೇ ನಿಮ್ಮೊಳಗೆ ಅವಿತಿರುವ ತಮೋಗುಣವನ್ನು ಪ್ರಕಾಶಿತಗೊಳಿಸುವುದು, ನೀವು ಇದನ್ನು ಮತ್ತು ಇದರ ದುಷ್ಪರಿಣಾಮವನ್ನು ಅರಿತುಕೊಂಡು ಇದರಿಂದ ಮುಕ್ತಿ ಹೊಂದಲು ಪ್ರೇರಿತರಾಗಲಿ ಎಂದು. ಇದಕ್ಕಾಗಿ ಈ ಪುಸ್ತಕವು ನಿಮಗೆ ಸರಳವಾಗ ತಂತ್ರಗಳನ್ನು ನೀಡುತ್ತದೆ –
· ನಿಮ್ಮ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು
· ನೀವು ಆಲಸಿಗಳೇ ಅಥವಾ ಅಪ್ರೇರಿತರೆ? ಇದನ್ನು ಹೇಗೆ ಅರಿಯುವುದು
· ಜಡತ್ವವನ್ನು ಚುರುಕುತನದಲ್ಲಿ ಹೇಗೆ ಬದಲಿಸುವುದು
· ಇಷ್ಟವಿಲ್ಲದ, ಕಠಿಣವಾದ, ಬೋರಿಂಗ್ ಮತ್ತು ಸಮಯ ಸಿಗದಿರುವ ಕೆಲಸಗಳನ್ನು ಹೇಗೆ ಪೂರೈಸುವುದು
· ಪ್ರತಿಯೊಂದು ಕೆಲಸವನ್ನು ಹೇಗೆ ಪೂರ್ಣಗೊಳಿಸುವುದು
· ಮನಸ್ಸಿನ ರೂಢಿಗಳನ್ನು ಹೇಗೆ ಬದಲಿಸುವುದು
· ಬೆಳಿಗ್ಗೆ ಬೇಗನೇಳುವ 7 ಸಾಟಿಯಿಲ್ಲದ ಉಪಾಯಗಳನ್ನು ಹೇಗೆ ಉಪಯೋಗಕ್ಕೆ ತರುವುದು
Reviews
There are no reviews yet.