ವಿಚಾರ ನಿಯಮ ಹಾಗು ಕ್ಷಮೆಯ ಜಾದು
ಎರಡು ಜಾದೂಭರಿತ ಶಕ್ತಿಗಳು
ಪ್ರತಿಯೊಬ್ಬ ಮನುಷ್ಯನಲ್ಲಿ ಎರಡು ಇಚ್ಛೆಗಳಿರುತ್ತವೆ, ಅವುಗಳನ್ನು ಪೂರ್ಣಗೊಳಿಸಲು ಅವನು ಜೀವನವಿಡೀ ಪ್ರಯತ್ನಿಸುತ್ತಿರುತ್ತಾನೆ. ಮೊದಲ ಇಚ್ಛೆಯೆಂದರೆ ಪ್ರೇಮ, ಶಾಂತಿ, ಸುಖ, ಸಂಪನ್ನತೆ, ಮಧುರ ಸಂಬಂಧಗಳಿಂದ ಕೂಡಿದ ಸುಖಮಯ ಜೀವನ ಹಾಗು ಎರಡನೆಯ ಇಚ್ಛೆಯೆಂದರೆ ತನ್ನ ಭೂತಕಾಲದ ಪಾಪಪ್ರಜ್ಞೆ(ತಪ್ಪಿತಸ್ಥ ಭಾವನೆ), ಕಹಿನೆನಪುಗಳು ಹಾಗು ದುಃಖಗಳಿಂದ ಮುಕ್ತಿ. ಮನುಷ್ಯನ ಈ ಎರಡೂ ಇಚ್ಛೆಗಳನ್ನು ಪೂರ್ಣಗೊಳಿಸಬಹುದಾದಂತಹ ಎರಡು ಜಾದೂಭರಿತ ಶಕ್ತಿಗಳಾದ ’ವಿಚಾರ ನಿಯಮ’ ಹಾಗು ’ಕ್ಷಮಾಸಾಧನೆ’ಯ ಪರಿಚಯವನ್ನು ಈ ಪುಸ್ತಕದ ಮುಖಾಂತರ ಮಾಡಿಕೊಡಲಾಗುತ್ತಿದೆ.
ಇವುಗಳಿಂದ ನೀವು ತಿಳಿಯುತ್ತೀರಿ:
* ಜೀವನದಲ್ಲಿ ಪ್ರೇಮ, ಶಾಂತಿ, ಸುಖ, ಸಂಪನ್ನತೆ, ಸ್ವಸ್ಥ್ಯವನ್ನು ಹೇಗೆ ತರುವುದು.
* ನಿಮ್ಮ ಸಂಬಂಧಗಳನ್ನು ಮಧುರ ಹಾಗು ಶಾಶ್ವತವಾಗಿ ಹೇಗೆ ಮಾಡುವುದು.
* ಸಫಲತೆ ನಿಮ್ಮಲ್ಲಿ ಸಹಜತೆಯಿಂದ ಹಾಗು ಸರಳವಾಗಿ ಹೇಗೆ ತಲುಪುವುದು.
* ನಕಾರಾತ್ಮಕ ವಿಚಾರಗಳನ್ನು, ಸಮಸ್ಯೆಗಳನ್ನು ಹಾಗು ಕೆಟ್ಟ ಘಟನೆಗಳನ್ನು ಸ್ವತಃದಿಂದ ಹೇಗೆ ದೂರವಿರಿಸುವುದು.
* ಭೂತಕಾಲದಲ್ಲಿ ನಡೆದ ಘಟನೆಗಳ ನೋವು ಹಾಗು ಪಾಪಪ್ರಜ್ಞೆ (ತಪ್ಪಿತಸ್ಥ ಭಾವನೆ)ಯಿಂದ ಹೇಗೆ ಮುಕ್ತಿ ಪಡೆಯುವುದು.
* ನಿಮ್ಮ ಎಲ್ಲ ಕರ್ಮಬಂಧನವನ್ನು ಅಳಿಸಿಹಾಕಿ, ಅರಳಿದ, ಪ್ರಫುಲ್ಲವಾದ ಆನಂದಿತ ಜೀವನವನ್ನು ಹೇಗೆ ನಡೆಸುವುದು.
ಸಫಲ ಹಾಗು ಆನಂದಿತ ಜೀವನವನ್ನು ನೀಡುವ ಈ ಜಾದೂಭರಿತ ಶಕ್ತಿಗಳಿಂದ ಕೂಡಿದ ಈ ಪುಸ್ತಕವನ್ನು ಯಾವಾಗಲೂ ನಿಮ್ಮ ಬಳಿ ಇಟ್ಟುಕೊಳ್ಳಿ ಹಾಗು ಪ್ರತಿಯೊಂದು ಹೆಜ್ಜೆಯಲ್ಲಿ ಮಾರ್ಗದರ್ಶನವನ್ನು ಪಡೆಯಿರಿ.
Reviews
There are no reviews yet.