ದೊಡ್ಡ ಸಫಲತೆಯ ಚಿಕ್ಕ ಆದರೆ ಪ್ರಮುಖ ಕೊಂಡಿ-ಭರವಸೆ
ನಿರಾಸೆ ಮತ್ತು ಅವಿಶ್ವಾಸದ ಭಾವನೆ ಒಂದು ನಿಧಾನಗತಿಯ ವಿಷವಿದ್ದ ಹಾಗೆ, ಇದು ಮನುಷ್ಯನ ಜೀವನದಲ್ಲಿ ನಿರಾಸೆಯನ್ನು ಹರಡಿ ಅವನ ಶಕ್ತಿಯನ್ನೆಲ್ಲ ನಷ್ಟಗೊಳಿಸುತ್ತದೆ. ಆದರೆ ಭರವಸೆ ಮತ್ತು ವಿಶ್ವಾಸದ ಭಾವನೆ ಅಮೃತವಿದ್ದಂತೆ, ಇದರ ಒಂದು ಹನಿಯನ್ನು ಸವಿದರೂ ಸಾಕು, ಮನುಷ್ಯ ತನ್ನ ಅತ್ಯುನ್ನತ ಸಂಭಾವ್ಯಗಳತ್ತ ಹಾಗು ಆನಂದಮಯ ಜೀವನದತ್ತ ಸಾಗುತ್ತಾನೆ.
* ನಿಮ್ಮ ಜೀವನದಲ್ಲಿಯೂ ನಿರಾಸೆಯ ವಿಷವು ಹರಡುತ್ತಿದೆಯೇ?
* ಜೀವನದಲ್ಲಿ ದೂರ-ದೂರದವರೆಗೂ ಮಸುಕಾದ ಒಂದು ಆಶಾಕಿರಣವೂ ಕೂಡ ಗೋಚರಿಸದಂಥ ಸ್ಥಿತಿ ನಿಮ್ಮದಾಗಿದೆಯೇ?
* ಸಂಕಟಗಳೊಂದಿಗೆ ಹೋರಾಡುವ ಬದಲು ಎಲ್ಲ ಕಷ್ಟಗಳಿಂದ ಮುಕ್ತಗೊಳ್ಳಬೇಕೆಂಬ ವಿಚಾರಗಳು ಬರುತ್ತಿವೆಯೇ?
* ನಿರಾಸೆಯ ಕತ್ತಲನ್ನು ಹೊಡೆದೋಡಿಸಿ ಉತ್ಸಾಹ, ಹುಮ್ಮಸ್ಸು ಮತ್ತು ಭರವಸೆಯ ಬೆಳಕಿನಲ್ಲಿ ನೀವು ಮುನ್ನಡೆಯಬಯಸುವಿರಾ?
ಈ ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರವು ’ಹೌದು’ ಎಂದಾದರೆ, ಈ ಪುಸ್ತಕವು ನಿಮ್ಮ ಮನದಲ್ಲಿ ವಿಶ್ವಾಸದೊಂದಿಗೆ ಭರವಸೆಯನ್ನು ಜಾಗೃತಗೊಳಿಸುವ ಭರವಸೆ ಮೂಡಿಸುವುದು.
ಭರವಸೆ ಸುಖೀಜೀವನದ ವ್ಯಕ್ತಪಡಿಸದ ಒಂದು ಕೊಂಡಿ, ಅದು ಚಿಕ್ಕದಾಗಿದ್ದರೂ ಜೀವನದ ಪ್ರಮುಖ ಆಧಾರವಾಗಿದೆ. ಭರವಸೆಯನ್ನೊಡಗೂಡಿದ ನಿಮ್ಮ ಆನಂದಮಯ ಜೀವನಕ್ಕಾಗಿ ಭರವಸೆ ತುಂಬಿದ ಹಾರೈಕೆಗಳು!
Reviews
There are no reviews yet.